*ಮಿಲ್ಲೇನಿಯಮ್ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ವಾಣೀನಗರ ಇದರ ನೂತನ ಕೊಠಡಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು*
ವಾಣೀನಗರ:
ಮಿಲ್ಲೇನಿಯಮ್ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ವಾಣೀನಗರ ಇದರ ನೂತನ ಕೊಠಡಿಯ ಉದ್ಘಾಟನಾ ಕಾರ್ಯಕ್ರಮ ಜರಗಿತು . ಶ್ರೀಮತಿ ಕುಸುಮ ಟೀಚರ್ ಉಧ್ಘಾಟಿಸಿ ಶುಭ ಹಾರೈಸಿದರು . ಮಾಜಿ ವಾರ್ಡ್ ಮೆಂಬರ್ ಯಸ್ ಬಿ ನರಸಿಂಹ ಪೂಜಾರಿ ಮಾತನಾಡುತ್ತಾ ಸಮಾನ ಮನಸ್ಕ ಯುವಕರ ಗುಂಪು ಸಮಾಜಮುಖಿ ಕೆಲಸ ಮಾಡುವುದರೊಂದಿಗೆ ಕಲೆ ಕ್ರೀಡೆ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಲ್ಲಿ ಕ್ಲಬ್ ಗಳ ಪಾತ್ರ ಮಹತ್ತರವಾದುದು ಎಂದು ನುಡಿದರು.ಎಣ್ಮಕಜೆ ಗ್ರಾಮ ಪಂಚಾಯತ್ ವತಿಯಿಂದ ನಮ್ಮ ಕ್ಲಬ್ ಗೆ ಲಭಿಸಿದ ಸ್ಪೊರ್ಟ್ಸ್ ಕಿಟ್ ಬಗ್ಗೆ ಧನ್ಯವಾದವನ್ನ ಸಮರ್ಪಿಸಲಾಯಿತು. ರಾಮಚಂದ್ರ ಮೊಳಕ್ಕಾಲು,ರವಿ ವಾಣೀನಗರ ಶುಭ ಕೋರಿದರು. ಇರ್ಶಾದ್ ವಾಣೀನಗರ ಕಾರ್ಯಕ್ರಮ ನಿರೂಪಿಸಿ ಪ್ರಮೋದ ವಾಣೀನಗರ ಧನ್ಯವಾದ ಸಮರ್ಪಿಸಿದರು..
0 Comments